Monday, November 14, 2011

ನನಗೆ ಮದುವೆ ಆಯ್ತು

ಹೊಸಾ ಹೆಂಡ್ತಿ ಬಂದೇಬಿಟ್ಲು
ಹಳೆ ಗೆಳತಿಯರೆಲ್ಲ ಓಡಿಹೊಗಿ
ನಾನೆ ನಿಮ್ನ ಕರೆಯೋವರೆಗು
SILENT ಆಗಿ ಮಾಯ ಆಗಿ


GIFTಉ ಗೊಂಬೆ ನೀವೆ ಇಟ್ಕೊಳಿ
ಪತ್ರಗಳನ್ನ ಸುಟ್ಟು ಹಾಕ್ಬಿಡಿ
ನನ್ನ ಪ್ರೀತಿ ಮನಸ್ಸಿನಲ್ಲಿ ಇರಲಿ
ಬೇರೆ PROOF ಇಟ್ಕೋಬೇಡಿ


ಪ್ರೀತಿಯ SMSಗಳನ್ನು DELETE ಮಾಡ್ಬಿಡಿ
ನನಗೆ ಮತ್ತೆ SMS ಮಾಡ್ಲೇಬೇಡಿ
TIME ಬಂದಾಗ ನಾನೆ CALL ಮಾಡ್ತೀನಿ
ಸಧ್ಯಕ್ಕೆ ನನ್ನ ನಂಬರ್ DELETE ಮಾಡ್ಬಿಡಿ


ನಾನು ಕೊಟ್ಟ ಮಾತುಗಳೆಲ್ಲಾ
ಒಂದು ಕೆಟ್ಟ ಕನಸು ಅಂದುಕೊಳ್ಳಿ
ಮಾತು ಬಿಟ್ಟು ಬೇರೆ ಕೊಟ್ಟಿದ್ರೆ
ಎಲ್ಲಾ ಪಾಂಡುರಂಗನ ಲೀಲೆ ಅಂದುಕೊಳ್ಳಿ


ನಾನು ಒಬ್ಬನೆ ಕಾಣಿಸ್ಕೊಂಡ್ರೆ
ಹತ್ರ ಬಂದು ಮಾತಾಡ್ಬಹುದು
ಹೆಂಡ್ತಿ ಜೊತೆ ಇದ್ದಾಗ್ ಮಾತ್ರ
SILENT ಆಗಿ ಸುಮ್ನೆ ಹೋಗಿ


ಕೃಷ್ಣನ ಹಾಗೆ ಇದ್ದೆ ಮೊದ್ಲು
ರಾಮನ ತರ ಇರ್ಬೇಕ್ ಇನ್ನು
ರಾಮಕೃಷ್ಣರ ಆಣೆ ಮಾಡಿ ಹೇಳ್ತಿನಿ
ನಿಮ್ ಪ್ರೀತಿ ನನ್ ಮನಸ್ಸಿನಲ್ಲೇ ಇರುತ್ತೆ, ನೀವು ಮಾತ್ರ ದೂರ ಇರಿ


No comments:

Post a Comment