Monday, November 14, 2011

ನದಿ

ಈ ಮನಸು ನದಿಯ ಹಾಗೆ
ಸಾಗರವ ಸೇರುವೆ ತವಕದಿ ಓಡುತಿಹುದು
ಇದ ನೀ ತಡೆಯುವ ದಡವಾಗಬೇದ
ಪ್ರೀತಿಯಲ್ಲಿ ನನ್ನನು ಕಟ್ಟಲು ಯತ್ನಿಸಬೇಡ



ಎಂದಿನಿಂದಲೊ ಓಡುತಿಹ ಈ ಹೊನಲು
ಕ್ಷಣಮಾತ್ರ ಪ್ರೀತಿಗಾಗಿ ನಿಲುಕದು
ಚಿನ್ನದಂತಹ ಭೂಮಿಯಲಿ ಹರಿದು ಬಂದಿಹುದು
ನಿನ್ನ ಚಿನ್ನದ ತುಣುಕುಗಳ ಕಂಡು ನಿಧಾನಿಸದು



ನಾ ಸೇರಬೆಕಾದ ಕಡಲು ನೀನಲ್ಲ
ನಾ ನಿಲ್ಲುವಂತಹ ದಡ ನೀನಲ್ಲ
ಒಲ್ಲದ ಈ ಮನಸಿಗೆ ಬಲೆ ಬೀಸಿ
ದಡ ಸೇರಿಸುವ ಪ್ರೀಥಿಯೂ ನಿನ್ನದಲ್ಲ



ನಾ ಹರಿದು ಬಂದ ದಾರಿಯಲಿ ಕುಂತ ದಡಗಳೆಶ್ಟೋ
ನನ್ನೆದೆಯಲಿ ಈಜಿ ಕುಣಿದ ಮೀನುಗಳೆಶ್ಟೋ
ಕುಣಿದ ಮೀನುಗಳಿಗೆ, ಜೊತೆ ಕೊಟ್ಟ ದಡಗಳಿಗೆ ಸಂಗಾತಿಯಾದರೆ
ನಿನ್ನ ಸಂದಿಸುವ ಮೊದಲೇ ಬತ್ತಿಹೊಗಿರುವಳು ಈ ನೀರೆ



ನನ್ನ ಹಿಡಿದಿಡುವ ಆಸೆಯನು ಕೈಬಿಡು
ಶರಧಿಯೆಡೆಗೆ ನನ್ನನು ನಗುತ ಬೀಳ್ಕೊಡು
ನಾ ಹರಿಯಬೆಕಾದ ದಾರಿ ಬಹಳಶ್ಟಿದೆ
ಕುಂತು ಮಾತನಾಡುವ ಸಮಯ ಎಲ್ಲಿದೆ



ಸಾಗರದಿ ಒಂದಾಗುತ ನಾ ಉಪ್ಪಾಗುವೆ
ನನ್ನ ನೆನಪಿಗೆ ಸಿಹಿಯನ್ನು ನಿನ್ನಲ್ಲೇ ಬಿಟ್ಟು ಹೋಗುವೆ
ನನ್ನ ಅಗಲಿಕೆಯ ಕ್ಷಣಗಳು ನಿನಗೆ ಸಿಹಿಯಾಗಿರಲಿ
ಉಪ್ಪಿನಂಗಳದಲ್ಲೂ ನಿನ್ನ ಸ್ನೇಹದ ನೆನಪು ನನಗೆ ಸಿಹಿಯಾಗಿರಲಿ

No comments:

Post a Comment